ಖೈದಿಗಳ ಕ್ಷೇಮಾಭಿವೃದ್ಧಿಗೆ ಕರ್ನಾಟಕ ರಾಜ್ಯ ಪರಿವರ್ತನ ಟ್ರಸ್ಟ್‌, “ಖೈದಿಗಳ ಪರಿವರ್ತನೆ ಸಮಾಜದ ಹಿತ ರಕ್ಷಣೆ
Home » CREDOPRESS  »  ಖೈದಿಗಳ ಕ್ಷೇಮಾಭಿವೃದ್ಧಿಗೆ ಕರ್ನಾಟಕ ರಾಜ್ಯ ಪರಿವರ್ತನ ಟ್ರಸ್ಟ್‌, “ಖೈದಿಗಳ ಪರಿವರ್ತನೆ ಸಮಾಜದ ಹಿತ ರಕ್ಷಣೆ
ಖೈದಿಗಳ ಕ್ಷೇಮಾಭಿವೃದ್ಧಿಗೆ ಕರ್ನಾಟಕ ರಾಜ್ಯ ಪರಿವರ್ತನ ಟ್ರಸ್ಟ್‌, “ಖೈದಿಗಳ ಪರಿವರ್ತನೆ ಸಮಾಜದ ಹಿತ ರಕ್ಷಣೆ

ಕರ್ನಾಟಕ ರಾಜ್ಯ ಪರಿವರ್ತನ ಖೈದಿಗಳ ಕ್ಷೇಮಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕರಾದ ಶ್ರೀ.ದಯಾನಂದ ಬಿ ಅವರನ್ನು ಭೇಟಿ ಮಾಡಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಇದರೊಟ್ಟಿಗೆ ಕಾಟನ್ ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಎರ್ರಿ ಸ್ವಾಮಿ ಅವರಿಗೂ ಶುಭಾಶಯ ಕೋರಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯ ಸಂಸ್ಥಾಪಕಾಧ್ಯಕ್ಷರು ಮತ್ತು ವಕೀಲರು ಆದ ಶ್ರೀ.ಶಿವ ಪ್ರಸಾದ್ ಎಸ್, ಕಾರ್ಯದರ್ಶಿಗಳಾದ ಶ್ರೀ.ಪ್ರಸಾದ್ ಕೆ, ಸದಸ್ಯರಾದ ಶ್ರೀ. ರುದ್ರೇಶ್ ವಿ ಮತ್ತು ಕ್ರೆಡೋ ಪ್ರೆಸ್ ನ್ಯೂಸ್ ವರದಿಗಾರದಾರ ಶ್ರೀ. ಮೋಹನ್ ಅವರು ಉಪಸ್ಥಿತರಿದ್ದು, ಶುಭಾಶಯ ತಿಳಿಸಿದರು.

 ಕರ್ನಾಟಕ ರಾಜ್ಯ ಪರಿವರ್ತನ ಖೈದಿಗಳ ಕ್ಷೇಮಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ (ರಿ.) ಎಂಬ ಸರ್ಕಾರೇತರ ಸಂಸ್ಥೆಯು ರಾಜ್ಯದ ಖೈದಿಗಳು ಮತ್ತು ಅವರ ಕುಟುಂಬಗಳ ಉದ್ಧಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸಂಸ್ಥೆಯನ್ನು 2019ರ ಸೆಪ್ಟೆಂಬರ್‌ನಲ್ಲಿ ಸ್ಥಾಪಿಸಲಾಗಿದ್ದು, ವಕೀಲರಿಂದ ಬಡ ಬಂಧಿಗಳಿಗಾಗಿ ಮತ್ತು ಸಮಾಜದ ಬಡ ನಾಗರಿಕರಿಗೋಸ್ಕರ ಕೆಲಸ ಮಾಡುತ್ತಿದೆ.

 ಸಂಸ್ಥೆಯು ಜೈಲಿನಿಂದ ಬಿಡುಗಡೆಯಾದ ಬಡ ಖೈದಿಗಳ ಪುನರ್ವಸತಿಗಾಗಿ ಮತ್ತು ಅವರ ಕುಟುಂಬದವರಿಗೆ ಆರ್ಥಿಕ ನೆರವು ನೀಡುತ್ತಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ, ಖೈದಿಗಳ ಕುಟುಂಬಗಳಿಗೆ ಮತ್ತು ಬಡ ಜನರಿಗೆ ಸುಮಾರು 10,000 ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಅಲ್ಲದೆ, ಸುಮಾರು 350 ಬಡ ವಿಚಾರಣಾಧೀನ ಬಂಧಿಗಳಿಗೆ ಉಚಿತ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದೆ.

 ಟ್ರಸ್ಟ್‌ನ ಪ್ರಮುಖ ಉದ್ದೇಶಗಳಲ್ಲಿ ಖೈದಿಗಳ ಮನ ಪರಿವರ್ತನೆ ಮಾಡಿಸಿ, ಅವರು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಹಾಯ ಮಾಡುವುದಾಗಿದೆ. ಇದಲ್ಲದೆ, ಬಡ ಜನರಿಗಾಗಿ ಉಚಿತ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಮತ್ತು ವೃದ್ಧಾಶ್ರಮ ವ್ಯವಸ್ಥೆಗಳನ್ನು ಸಹ ಒದಗಿಸುತ್ತಿದೆ. ಟ್ರಸ್ಟ್‌ನ ಘೋಷವಾಕ್ಯ "ಖೈದಿಗಳ ಪರಿವರ್ತನೆ ಸಮಾಜದ ಹಿತ ರಕ್ಷಣೆ".

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

Leave a Reply

Your email address will not be published. Required fields are marked *