ಎಚ್ಎಎಲ್ ಪೊಲೀಸ್ ಠಾಣಾ ತರಹದ್ದೀನ ವಿಭೂತಿಪುರದಲ್ಲಿ ವಾಸವಿರುವ ಪಿರಿಯಾದುದಾರರು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ
ಮನೆಯ ಮುಂಭಾಗದಲ್ಲಿ ವಾಹನವನ್ನು ನಿಲ್ಲಿಸಿ ಬೆಳಿಗ್ಗೆ ಬಂದು ದ್ವಿಚಕ್ರ ವಾಹನವನ್ನು ನೋಡಲಾಗಿ ಯಾರು ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಎಚ್ಎಎಲ್ ಪೊಲೀಸರು ವಿವಿಧಾಯಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನ ಆಧರಿಸಿ ಆಂಧ್ರಪ್ರದೇಶದ ಅಣ್ಣಮಯಿ ಜಿಲ್ಲೆಯ ಮದನಪಲ್ಲಿಯ ಒಂದು ಮುಖ್ಯ ರಸ್ತೆಯಲ್ಲಿ ಒಬ್ಬ ಆರೋಪಿಯನ್ನು ಪೂರ್ಣವಾಗಿ ವಿಚಾರಿಸಿ ಕಳ್ಳತನ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಬೆಂಗಳೂರು ನಗರ, ಹೊಸಕೋಟೆ, ವಿಜಯಪುರದಲ್ಲಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ
ಆರೋಪಿಯು ಕಳುವು ಮಾಡಿದ ದ್ವಿಚಕ್ರ ವಾಹನಗಳ ಪೈಕಿ 20 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ಮದನಪಲ್ಲಿ ಎಲ್ಲಿರುವ ಸ್ನೇಹಿತರೊಬ್ಬರಿಗೆ ನೀಡಿರುವುದಾಗಿ ಹಾಗೂ 12 ದ್ವಿಚಕ್ರ ವಾಹನಗಳನ್ನು ಮದನಪಲ್ಲಿಯ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದು ಒಟ್ಟು 32 ದಚಕ್ರ ವಾಹನಗಳನ್ನು ಎಚ್ಎಎಲ್ ಪೊಲೀಸರು ವಶಪಡಿಸಿ ಕೊಂಡಿರುತ್ತಾರೆ
ಈ ಪ್ರಕರಣದ ಆರೋಪಿಯ ಬಂದನದಿಂದ ಒಟ್ಟು 40 ಲಕ್ಷ ರೂಪಾಯಿಯ ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ಎಚ್ಎಎಲ್ ಪೊಲೀಸರು ವಶಪಡಿಸಿಕೊಂಡಿರುತ್ತಾರೆ
- ಕೆ ಆರ್ ಪುರಂ ಪೊಲೀಸ್ ಠಾಣೆಯ 7 ದ್ವಿಚಕ್ರ ವಾಹನ
- ಅವಲಳ್ಳಿ ಪೊಲೀಸ್ ಠಾಣೆಯ ಐದು
- ಎಚ್ಎಎಲ್ ಪೊಲೀಸ್ ಠಾಣೆಯ ಎರಡು
- ಹೊಸಕೋಟೆ ಪೊಲೀಸ್ ಠಾಣೆಯ ಒಂದು
- ವಿಜಯಪುರ ಪೊಲೀಸ್ ಠಾಣೆಯ ಒಂದು
ಸೇರಿದಂತೆ ಒಟ್ಟು 16 ದ್ವಿಚಕ್ರವಾಹನದ ಕಳವು ಪ್ರಕರಣಗಳು ಪತ್ತೆಯಾಗಿರುತ್ತದೆ
ಈ ಕಾರ್ಯಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ವಿಭಾಗ ಶಿವಕುಮಾರ್ ಗುಣಾರೇ ಐಪಿಎಸ್, ಸಹಾಯಕ ಪೊಲೀಸ್ ಆಯುಕ್ತರು ಮಾರತಳ್ಳಿ ಉಪ ವಿಭಾಗ ಪ್ರಿಯದರ್ಶಿನಿ ಈಶ್ವರ್, ರವರ ಮಾರ್ಗದರ್ಶನದಲ್ಲಿ ಎಚ್ಎಎಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಜವೃದ್ಧಿನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿರವರ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ
