ಬೊಮ್ಮನಹಳ್ಳಿ ಠಾಣಾ ಪೊಲೀಸ್ ರಿಂದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ.
Home » CREDOPRESS  »  ಬೊಮ್ಮನಹಳ್ಳಿ ಠಾಣಾ ಪೊಲೀಸ್ ರಿಂದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ.
ಬೊಮ್ಮನಹಳ್ಳಿ ಠಾಣಾ ಪೊಲೀಸ್ ರಿಂದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ.

ಬೊಮ್ಮನಹಳ್ಳಿಯ ಹೊಂಗಸಂದ್ರದ ಲೋರಾರ್ನ ಪದವಿ ಪೂರ್ವ ಕಾಲೇಜಿನಲ್ಲಿ ಬೊಮ್ಮನಹಳ್ಳಿ ಠಾಣಾ ಪೊಲೀಸ್ ರಿಂದ ಮಾದಕ ವಸ್ತು ವಿರೋಧಿ ದಿನ ಆಚರಣೆ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು ಮತ್ತು ವಿದ್ಯಾರ್ಥಿಗಳಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಲಾಯಿತು.


ಮಾದಕ ವಸ್ತುಗಳ ತಡೆಯುವಿಕೆ ಮತ್ತು ಪಾಲಿಸಬೇಕಾದ ಮುನ್ನ ಎಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಶಾಲಾ ಕಾಲೇಜು ಸುತ್ತಮುತ್ತಲಿನ ಬೇಕರಿ ಪೆಟ್ಟಿ ಅಂಗಡಿ ಮುಂಭಾಗ ತಂಬಾಕು, ಸಿಗರೇಟ್, ಇನ್ನಿತರ ಮಾದಕ ವಸ್ತುಗಳ ಮಾರಾಟ ನಿಷೇದ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಈಗ ಬಹಳ ಸಮಸ್ಯೆ ಆಗಿರೋದು ಇದೆ ವಿಚಾರ… ಆರೋಗ್ಯವಂತ ಯುವಕರ ಸಮಾಜ ನಮ್ಮದಾಗಲಿ ಇಂತಹ ಮಾದಕ ವಸ್ತುಗಳನ್ನು ಸಂಪೂರ್ಣ ತೊರೆದು ಉತ್ತಮ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆದು ಸಮಾಜಕ್ಕೆ ಮಾದರಿಯಾಗೋಣ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪ್ರೀತಮ್ ತಿಳಿಸಿದರು.

ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಯನ್ನು ಬೋದಿಸಿದರು.
ಕಾರ್ಯಕ್ರಮವನ್ನು ಉಪ ಪೊಲೀಸ್ ಆಯುಕ್ತರಾದ ಸಾ. ರಾ. ಫಾತಿಮಾ ರವರ ಮತ್ತು
ಸಹಾಯಕ ಪೊಲೀಸ್ ಆಯುಕ್ತರಾದ ಶಿವ ಶಂಕರ್ ರೆಡ್ಡಿ ರವರ ಮಾರ್ಗದರ್ಶನ ದಲ್ಲಿ
ಬೊಮ್ಮನಹಳ್ಳಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ರೀತಮ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ರೀತಮ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರೀಶ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಇತರೆ ಸಿಬ್ಬಂದಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದರು.

ಪ್ರತಿಜ್ಞೆ
ನಾನು ಇಂದು ಪ್ರತಿಜ್ಞೆ ಮಾಡುತ್ತೇನೆ. ನಾನು ಯಾವ ಸಂದರ್ಭದಲ್ಲೂ
ಮಾದಕವಸ್ತುಗಳನ್ನು ಬಳಸುವುದಿಲ್ಲ. ನನ್ನ ಆರೋಗ್ಯ ಭವಿಷ್ಯ ಮತ್ತು ಕುಟುಂಬವನ್ನು ನಾನು ರಕ್ಷಿಸುತ್ತೇನೆ.
ನಾನು ಬದಲಾವಣೆಯ ದೂತನಾಗಿರುತ್ತೇನೆ ಮತ್ತು ಮಾದಕ ವಸ್ತುಗಳ ವಿರುದ್ಧವಾದ ಜೀವನವನ್ನು ಆಯ್ಕೆ ಮಾಡುತ್ತೇನೆ.

ನಾನು ನನ್ನ ಸ್ನೇಹಿತರಿಗೆ ತಪ್ಪು ದಾರಿಗೆ ಹೋಗದಂತೆ ಎಚ್ಚರಿಸುತ್ತೇನೆ ಮತ್ತು ಮಾದಕವಸ್ತುಗಳ ವಿರುದ್ಧ ಧೈರ್ಯದಿಂದ ನಿಂತು ಮಾದಕದ್ರವ್ಯ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸುತ್ತೇನೆ.
ಎಂದು ಪ್ರತಿಜ್ಞಾ ವಿಧಿ ಯನ್ನು ಬೋದಿಸಿದರು.

Leave a Reply

Your email address will not be published. Required fields are marked *